ದಿವಾಳಿಯಾದ ಸ್ಪಿರಿಟ್ ಏರ್‌ಲೈನ್ಸ್‌ನ ಹಳೇ ಇಮೇಲ್, ಚಾಟ್ಸ್ ಖರೀದಿಸಿದ ಗೂಗಲ್! ಬರೋಬ್ಬರಿ 95 ಕೋಟಿ ರೂ. ಡೀಲ್! ಏನಿದು AI ಡೇಟಾ ಗೇಮ್?
ನೀವು ಆಫೀಸ್‌ನಲ್ಲಿ ಟೈಮ್‌ಪಾಸ್‌ಗೆ ಮಾಡೋ ಚಾಟ್ಸ್, ಸುಮ್ಮನೆ ಬರೆದು ಕಳಿಸೋ ಇಮೇಲ್, ಡಿಲೀಟ್ ಮಾಡಿರೋ ಎಕ್ಸೆಲ್ ಶೀಟ್‌ಗಳಿಗೆ... 95 ಕೋಟಿ ರೂಪಾಯಿ ಬೆಲೆ ಇದೆ ಅಂತ ಹೇಳಿದ್ರೆ ನೀವು ನಂಬ್ತೀರಾ? ಖಂಡಿತ ನಂಬಲ್ಲ! ಆದ್ರೆ ಗೂಗಲ್, ಪೂರ್ತಿಯಾಗಿ ಮುಚ್ಚಿಹೋಗಿರೋ ಒಂದು ಕಂಪನಿಯ ಹಳೇ ಇಂಟರ್ನಲ್ ಡೇಟಾವನ್ನು ಖರೀದಿಸಲು ಬರೋಬ್ಬರಿ 95 ಕೋಟಿ ರೂಪಾಯಿ ಸುರಿದಿದೆ! ಅಮೆರಿಕದ ಫೇಮಸ್ ಬಜೆಟ್ ಏರ್‌ಲೈನ್ಸ್ ಆಗಿದ್ದ ಸ್ಪಿರಿಟ್ ಏರ್‌ಲೈನ್ಸ್... ಇತ್ತೀಚಿಗಷ್ಟೇ ಅಂದ್ರೆ ಇದೇ ವರ್ಷದ ಮೇ ತಿಂಗಳಲ್ಲಿ ಸಾಲಬಾಧೆ ತಾಳಲಾರದೆ ಪೂರ್ತಿಯಾಗಿ ಮುಚ್ಚಿಹೋಗಿದೆ. ಆದ್ರೆ, ಈ ಕಂಪನಿಯ ಹಳೆಯ ಇಂಟರ್ನಲ್ ಬಿಸಿನೆಸ್ ಡೇಟಾವನ್ನು ಕೊಂಡುಹೋಗಲು ಗೂಗಲ್ ಈಗ 10 ಮಿಲಿಯನ್ ಡಾಲರ್, ಅಂದ್ರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 95 ಕೋಟಿಗೂ ಹೆಚ್ಚಿನ ಹಣ ಕೊಟ್ಟು ಬಿಡ್ ಗೆದ್ದಿದೆ. ಅಷ್ಟೇ ಅಲ್ಲ, ಮರ್ಕೋರ್ ಅನ್ನೋ ಇನ್ನೊಂದು AI ಸ್ಟಾರ್ಟ್ಅಪ್ ಕೂಡ ಇದೇ ಡೇಟಾಗಾಗಿ 7.5 ಮಿಲಿಯನ್ ಡಾಲರ್ ಬಿಡ್ ಮಾಡಿ ಸೆಕೆಂಡ್ ಪ್ಲೇಸ್‌ನಲ್ಲಿದೆ. ಒಂದುವೇಳೆ ಗೂಗಲ್ ಡೀಲ್ ಕ್ಯಾನ್ಸಲ್ ಆದ್ರೆ, ಈ ಮರ್ಕೋರ್ ಕಂಪನಿ ಬ್ಯಾಕಪ್ ಬೈಯರ್ ಆಗಿ ರೆಡಿಯಿದೆ. ಇಷ್ಟಕ್ಕೂ ಗೂಗಲ್‌ಗೆ ಈ ಮುಚ್ಚಿಹೋದ ಕಂಪನಿಯ ಡೇಟಾ ಯಾಕೆ ಬೇಕು? ನಾವು ಆಫೀಸ್‌ನಲ್ಲಿ ಮಾಡೋ ಚಾಟ್ಸ್, ಕಳಿಸೋ ಇಮೇಲ್ಸ್ ಇಟ್ಕೊಂಡು ಗೂಗಲ್ ಏನ್ ಮಾಡುತ್ತೆ? ಇದರ ಹಿಂದೆ ಇರೋ ಆ ದೊಡ್ಡ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಥವಾ AI ಟ್ರೈನಿಂಗ್ ಗೇಮ್ ಏನು? ನಮ್ಮ ನಿಮ್ಮೆಲ್ಲರ ಪರ್ಸನಲ್ ಡೇಟಾ ಏನಾದ್ರೂ ಸೇಲ್ ಆಗ್ತಿದ್ಯಾ? ಬನ್ನಿ ಈ ವಿಡಿಯೋದಲ್ಲಿ ಕಂಪ್ಲೀಟ್ ಡಿಟೇಲ್ಸ್ ಅನ್ನು ನೋಡೋಣ...
ಯೆಸ್, ವೀಕ್ಷಕರೇ ದಿವಾಳಿಯಾದ ಕಂಪನಿಯ ಬಿಸಿನೆಸ್ ಡೇಟಾವನ್ನು ಖರೀದಿಸಲು ಗೂಗಲ್ ಹಿಂದೆ ಬಿದ್ದಿದೆ.. ಇದಕ್ಕಾಗಿ ಬರೋಬ್ಬರಿ 10 ಮಿಲಿಯನ್ ಡಾಲರ್ ಅಮೌಂಟ್ ಅನ್ನು ನೀಡುತ್ತಿದೆ. ನಿಮಗೊಂದು ಡೌಟ್ ಬರಬಹುದು, ಅದೇನಪ್ಪಾ ಅಂತಹ ಡೇಟಾ ಆ ಸ್ಪಿರಿಟ್ ಏರ್‌ಲೈನ್ಸ್ ಹತ್ತಿರ ಇತ್ತು ಅಂತ. ಸ್ಪಿರಿಟ್ ಏರ್‌ಲೈನ್ಸ್ ಅನ್ನೋದು ಅಮೆರಿಕದ ಒಂದು ಲೋ-ಕಾಸ್ಟ್ ಏರ್‌ಲೈನ್ಸ್. ಸಾಲದ ಹೊರೆಯಿಂದಾಗಿ ಅಂದ್ರೆ ದಿವಾಳಿ ಅಂತ ಡಿಕ್ಲೇರ್ ಮಾಡಿ, ಸುಮಾರು 8.1 ಬಿಲಿಯನ್ ಡಾಲರ್ ಸಾಲದಲ್ಲಿ ಸಿಲುಕಿ, ಮೇ 2 ರಂದು ತನ್ನ ಆಪರೇಷನ್ಸ್ ಅನ್ನು ಪೂರ್ತಿ ಕ್ಲೋಸ್ ಮಾಡ್ತು.
← ಮುಖಪುಟ (Home)