ಹಾರಂಗಿ ಅಣೆಕಟ್ಟು (Harangi Dam) ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಹುಡ್ಗೂರು ಗ್ರಾಮದ ಬಳಿ ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಾಗಿದೆ. ಹಾರಂಗಿ ನದಿಯು ಪುಷ್ಪಗಿರಿ ಬೆಟ್ಟಸಾಲಿನಲ್ಲಿ ಹುಟ್ಟಿ ಕಾವೇರಿ ನದಿಗೆ ಹುಡ್ಗೂರು ಬಳಿ ಸೇರುತ್ತದೆ.
1982 ರಲ್ಲಿ ನಿರ್ಮಾಣಗೊಂಡ ಈ ಅಣೆಕಟ್ಟು ಕೊಡಗು ಮತ್ತು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ತಾಲೂಕುಗಳ ಲಕ್ಷಾಂತರ ಎಕರೆ ಭೂಮಿಗೆ ನೀರಾವರಿ ಒದಗಿಸುತ್ತದೆ.